ಪುರುಷರ ಚರ್ಮದ ಕಾಂತಿ ಹೆಚ್ಚಿಸುವ ಸುಲಭ ೫ ನಿಮಿಷದ ದಿನಚರಿ

ಪುರುಷರ ಚರ್ಮದ ಕಾಂತಿ ಹೆಚ್ಚಿಸುವ ಸುಲಭ ೫ ನಿಮಿಷದ ದಿನಚರಿ

ಪುರುಷರ ಚರ್ಮದ ಆರೈಕೆ ಸರಿಯಾಗಿ ಆಗದಿದ್ದಲ್ಲಿ ಚರ್ಮವು ಸುಕ್ಕು ಬಿದ್ದು ವಯ್ಯಸ್ಸಾದಂತೆ ಕಾಣುವುದು. ಈ ೫ ನಿಮಿಷದ ದಿನಚರಿ ನಿಮ್ಮ ಚರ್ಮಕ್ಕೆ ಹೊಳಪು ನೀಡಿ ಸುಂದರತೆ ಹೆಚ್ಚಿಸುವುದು.

ಪುರುಷರ ಸಾಮಾನ್ಯವಾದ ಚರ್ಮದ ದಿನಚರಿ ಎಂದರೆ , ಸೂಪರ್‌ ಮಾರ್ಕೆಟ್‌ನಿಂದ ಆರಿಸಲ್ಪಟ್ಟ ಶವರ್ ಜೆಲ್ ಮತ್ತು ಬಾಡಿ ಸ್ಪ್ರೇ ಗಳನ್ನು ತರುವುದು ಅದನ್ನು ಸರಿಯಾಗಿ ತಿಳಿದುಕೊಳ್ಳದೆ ಉಪಯೋಗಿಸುವುದು . ಆದರೆ ನಿಮ್ಮ ಚರ್ಮಕ್ಕೂ ಪೌಷ್ಟಿಕಾಂಶಗಳ ಅವಶ್ಯಕತೆ ಇದೆ . ಇದರ ಆರೈಕೆ ಸರಿಯಾಗಿ ಮಾಡದಿದ್ದಲ್ಲಿ , ಬಹಳ ಬೇಗ ಚರ್ಮ ಸುಕ್ಕು ಬಿದ್ದು ವಯಸ್ಸಾದಂತೆ ಕಾಣುವಿರಿ .

ಸರಿಯಾದ ಚರ್ಮದ ರಕ್ಷಣೆಯಿಂದ ಪ್ರತಿಯೊಬ್ಬರೂ ಲಾಭ ಮತ್ತು ಪ್ರಯೋಜನಗಳನ್ನು ಪಡೆಯುತ್ತಾರೆ. ಸಾಕಷ್ಟು ಪುರುಷರಿಗೆ, ಚರ್ಮದ ರಕ್ಷಣೆಯ ವಿಧಾನಗಳ ಅರಿವಿರುವುದಿಲ್ಲ . ಪ್ರತಿದಿನ ಈ ದಿನಚರಿಯನ್ನು ಅನುಸರಿಸಿದಲ್ಲಿ ನಿಮ್ಮ ಮುಖದ ಚರ್ಮ ಮೊಡವೆ ಕಲೆ ರಹಿತವಾಗಿ ಕಾಂತಿಯುತವಾಗಿ ಇರುತ್ತದೆ . ಇದೇ ಕ್ರಮವನ್ನೇ ಚಿತ್ರ ನಟರು ಮಾಡೆಲ್ಗಳು ದಿನಂಪ್ರತಿ ಅನುಸರಿಸುವುದು .

ಈ ಲೇಖನದಲ್ಲಿ, ಪುರುಷರಿಗಾಗಿ ಸರಳ, ಸುಲಭ ಮತ್ತು ಪರಿಣಾಮಕಾರಿ ಚರ್ಮದ ರಕ್ಷಣೆಯ ದಿನಚರಿಯನ್ನು ವಿವರಿಸಲಾಗಿದೆ .

4 ಹಂತದ ದೈನಂದಿನ ಪುರುಷರ ಚರ್ಮದ ರಕ್ಷಣೆಯ ಕ್ರಮ 

  1. ನಿರ್ಜೀವ ಚರ್ಮ ತೆಗೆಯುವುದು – Exfoliation (30 ಸೆಕೆಂಡುಗಳು – ವಾರಕ್ಕೆ 2 ರಿಂದ 3 ಸಲ , )
  2. ಚರ್ಮದ ಶುದ್ಧೀಕರಣ – Cleansing  (ಪ್ರತಿದಿನ , 30 ಸೆಕೆಂಡುಗಳು)
  3. ಚರ್ಮಕ್ಕೆ ಪೋಷಕಾಂಶಗಳ ಪೂರೈಕೆ – Serum application  (ಪ್ರತಿದಿನ, 10 ಸೆಕೆಂಡುಗಳು)
  4. ಚರ್ಮದ ತೇವಾಂಶ ಕಾಪಾಡುವುದು – Moisturising (ಪ್ರತಿದಿನ, 10 ಸೆಕೆಂಡುಗಳು)

#1 ನಿರ್ಜೀವ ಚರ್ಮ ತೆಗೆಯುವುದು – Exfoliation (30 ಸೆಕೆಂಡುಗಳು – ವಾರಕ್ಕೆ 2 ರಿಂದ 3 ಸಲ , )

ಮೊದಲ ಹಂತವು , ಎಫ್ಫೋಲಿಯೇಶನ್ , ಸತ್ತ ಚರ್ಮದ ಕೋಶಗಳು, ಕೊಳಕು ಮತ್ತು ಮೇದೋಗ್ರಂಥಿಗಳ ಜಿಡ್ಡನ್ನು , ಸ್ರಾವವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.  ಈ ಹಂತದಲ್ಲಿ ಸ್ಕ್ರಬ್ ಉಪಯೋಗಿಸಬೇಕು .   ಕೆಮಿಕಲ್  ಉತ್ಪನ್ನಗಳಿಗಿಂತ ಆರ್ಗಾನಿಕ್ ಅಥವಾ ಹರ್ಬಲ್ ಉತ್ಪನ್ನಗಳು ಬಹಳ ಒಳ್ಳೆಯದು .  ಈ ವಿಧಾನಕ್ಕೆ ಕೆಳಕಂಡ ಸ್ಕ್ರಬ್ ಗಳು  ಸಹಾಯ ಮಾಡುತ್ತವೆ .

COFFEE SCRUBKUMKUMADI FACE SCRUB

Ingredients: coffee, walnut,
hibiscus, argan oil, VitaminE

Ingredients: Kumkumadi Tailam ,
Sandalwood, Kesar (saffron),
Almond Oil, Sunflower Godhal Flower,
Turmeric, Lotus, Anar (pomegranate),
Grapes, Nut,Olive Oil
Rs 325/-
Rs 649/-

ಎಕ್ಸ್ಫೋಲಿಯೇಷನ್ ಉತ್ಪನ್ನಗಳು ಚರ್ಮದ ಅಳದವರೆಗೂ ಇಳಿದು ಅಲ್ಲಿನ ಕಲ್ಮಶಗಳನ್ನು ತೊಡೆದು ಹಾಕುತ್ತವೆ . ಇದರಿಂದ ಮೊಡವೆ , ಗುಳ್ಳೆಗಳು, ಬ್ಲ್ಯಾಕ್‌ಹೆಡ್‌ಗಳು ಮೂಡುವುದು ಕಡಿಮೆಯಾಗುತ್ತದೆ .

ಸ್ವಲ್ಪ ಸ್ಕ್ರಬ್‌ ಬೆರಳುಗಳಲ್ಲಿ ತೆಗೆದುಕೊಂಡು ಮುಖಕ್ಕೆ ಹಚ್ಚಿ ಅಂಗೈಯಿಂದ ಸುಮಾರು 30 ಸೆಕೆಂಡುಗಳ ಕಾಲ ಮುಖ ಹಾಗು ಕತ್ತನ್ನು  ಮಸಾಜ್ ಮಾಡಿ. ಕಲೆಗಳಿರುವಲ್ಲಿ  ಸ್ವಲ್ಪ ಚೆನ್ನಾಗಿ ಮಸಾಜ್ ಮಾಡಿ . ಇದನ್ನು ವಾರಕ್ಕೆ ಮೂರು ಬಾರಿ ಮಾಡಬೇಕು .  (ಎರಡು ದಿನಗಳಿಗೊಮ್ಮೆ )

#2 ಚರ್ಮದ ಶುದ್ಧೀಕರಣ – Cleansing  (ಪ್ರತಿದಿನ , 30 ಸೆಕೆಂಡುಗಳು)

ನಿಮ್ಮ ಚರ್ಮದ ರಕ್ಷಣೆಯ ದಿನಚರಿಯಲ್ಲಿ ಶುದ್ಧೀಕರಣವು ಪ್ರಮುಖ ದೈನಂದಿನ ನಿರ್ವಹಣಾ ಹಂತವಾಗಿದೆ. ದಿನವಿಡೀ, ನಿಮ್ಮ ಚರ್ಮವು ಕೊಳಕು, ಬ್ಯಾಕ್ಟೀರಿಯಾ ಮತ್ತು ಪರಿಸರ ಕಲ್ಮಶಗಳಿಗೆ ಒಡ್ಡಿಕೊಳ್ಳುತ್ತದೆ, ಜೊತೆಗೆ ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸುತ್ತದೆ . ಇವೆಲ್ಲಾ ಚರ್ಮದ ಮೇಲೆಯೇ ಸಂಗ್ರಹವಾಗಿ , ಚರ್ಮದ ರಂಧ್ರಗಳ ಒಳಗೂ ಸೇರಿಕೊಂಡಿರುತ್ತವೇ . ಇದರಿಂದ ಆಕ್ನೆ , ಮೊಡವೆ , ಬ್ಲಾಕ್ ಹೆಡ್ ಇವೆಲ್ಲವೂ ಶುರುವಾಗುತ್ತವೆ ಮತ್ತು ಮುಖದ ಸೌಂದರ್ಯ ಕೆಡಿಸುತ್ತವೆ . ಕ್ಲೆನ್ಸಿಂಗ್ ಅಥವಾ ಶುದ್ಧೀಕರಣವು ಇವನ್ನೆಲ್ಲಾ ತೊಡೆದು ಚರ್ಮದ ರಂಧ್ರಗಳು ಮುಚ್ಚದಂತೆ ತಡೆಯುತ್ತದೆ .

ಶುದ್ಧೀಕರಣ ಕ್ರಮಕ್ಕೆ  ಕೆಳಗಿನ ಕ್ಲೆನ್ಸೆರ್ ಗಳನ್ನು ಬಳಸಬಹುದು . ಇವು ಪುರುಷರ ತ್ವಚೆಗೆಂದೇ ತಯಾರಿಸಲಾಗಿದೆ

KHADI NEEM TULSI CLEANSERHoney & Aloevera Face Wash

Ingredients :
Neem, Green Volcanic Clay,
Aloevera, Tulsi, Eucalyptus,

Ingredients:
honey, nagkesar, aloevera,
anantmul, carrot seeds,
rose, lemon, vanilla
Rs 495/-
Rs 625/-

ಪ್ರತಿದಿನ ಬೆಳಗ್ಗೆ  ಒದ್ದೆಯಾದ ಮುಖದ ಚರ್ಮದ ಮೇಲೆ ಸ್ವಲ್ಪ ಕ್ಲೆನ್ಸರ್ ಅನ್ನು ಹಚ್ಚಿ  ೩೦ ಸೆಕೆಂಡುಗಳ ಕಾಲ ಮಸಾಜ್ ಮಾಡಿ ನಂತರ ಶುದ್ಧವಾದ ನೀರಿನಿಂದ ತೊಳೆಯಿರಿ .

# 3 ಚರ್ಮಕ್ಕೆ “ಸೀರಂ” ಗಳಿಂದ ಪೋಷಕಾಂಶಗಳ ಪೂರೈಕೆ – Serum application  (ಪ್ರತಿದಿನ, 10 ಸೆಕೆಂಡುಗಳು)

ಸೀರಮ್‌ಗಳು ಚರ್ಮಕ್ಕೆ ಬೇಕಾದ ಉತ್ತಮ ಗುಣಕಾರಿ ಪೋಷಕಾಂಶಗಳಿಂದ ಕೂಡಿರುತ್ತದೆ . ಇದರಿಂದ ಚರ್ಮದ ಪೋಷಣೆ ಬೇಗನೆ ಆಗುತ್ತದೆ ಹಾಗು ಚರ್ಮ ಕಾಂತಿಯುತವಾಗಿ ಆರೋಗ್ಯಕಾರಿಯಾಗುತ್ತದೆ . ಪುರುಷರ ಚರ್ಮಕ್ಕೆ ಕೆಳಗಿನ ಸೀರಂ ಗಳು ಉಪಯುಕ್ತವಾಗಿವೆ .

Himalayan Organics Vitamin C & E SerumSpruce Shave Club Vitamin C Serum

Ingredients:
ashwagandha,
licorice (yashtimadhu),
Moringa (drumstick), aloevera,
mandukaparni (centella asciatica or gotukola)


Ingredients
Vitamin C, Moringa, Green Tea, Ashwagandha, Gotu Kola, Licorice, Aloe Vera, hyaluronic acid,
Price : Rs 999/-
Price -Rs 385/-

ಒಂದು ಬಟಾಣಿ ಗಾತ್ರದಷ್ಟು ಸೀರಂ ಅನ್ನು ಅಂಗೈಯಲ್ಲಿ ಹಾಕಿಕೊಂಡು ಎರಡೂ ಅಂಗೈಗಳಿಂದ ಸ್ವಲ್ಪ ಉಜ್ಜಿ . ನಂತರ ಸೀರಂ ಅನ್ನು ಮುಖ ಹಾಗು ಕತ್ತಿನ ಮೇಲೆ ಸವರಿಕೊಳ್ಳಿ . ಆದರೆ ಜೋರಾಗಿ ಮಸಾಜ್ ಮಾಡಬೇಡಿ . ೫ ನಿಮಿಷಗಳ ನಂತರ ಶುದ್ಧವಾದ ನೀರಿನಿಂದ ಮುಖ ತೊಳೆದುಕೊಳ್ಳಿ .

ಸೀರಂ ಉಪಯೋಗಿಸುವ ಮುಂಚೆ ಅದರ ಮೇಲೆ ಬರೆದಿರುವ ಸಲಹೆಗಳನ್ನು ಓದಿ .

#4 ಚರ್ಮದ ತೇವಾಂಶ ಕಾಪಾಡುವುದು – Moisturising (ಪ್ರತಿದಿನ, 10 ಸೆಕೆಂಡುಗಳು)

ತೇವಾಂಶವು ಚರ್ಮಕ್ಕೆ ಅತ್ಯಗತ್ಯವಾಗಿದೆ . ಚರ್ಮದ ತೇವಾಂಶ ಕಡಿಮೆಯಾದರೆ ತ್ವಚೆ ಒಣಗುತ್ತದೆ , ಸುಕ್ಕುಗಳು ಮೂಡುತ್ತವೆ ಮತ್ತು ಬಹಳ ಬೇಗ ವಯಸ್ಸಾದಂತೆ ಕಾಣುತ್ತದೆ . ಚರ್ಮದ ತೇವಾಂಶ ಕಾಯ್ದುಕೊಳ್ಳಲು ಹಾಗು ಹೆಚ್ಚಿಸಲು ಕೆಳಗಿನ ಮೊಯಿಶ್ಚರೈಸರ್ ಗಳು ಪುರುಷರಿಗೆ ಸೂಕ್ತವಾಗಿವೆ

UrbanGabru Insta Glow Fairness CreamTEJ Anti Ageing Cream

Price : Rs 330/-
Price -Rs 749/-

ಮಾಯಿಶ್ಚರೈಸರ್ ಚರ್ಮದ ಮೇಲೆ ರಕ್ಷಣಾತ್ಮಕ ತಡೆಗೋಡೆ ರೂಪಿಸುತ್ತದೆ, ಇದು ರಂಧ್ರಗಳನ್ನು ಮುಚ್ಚಿಹೋಗದಂತೆ ಕೊಳೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಏಕಾಏಕಿ ಉಂಟಾಗುವ ಬ್ಯಾಕ್ಟೀರಿಯಾದ ವಿರುದ್ಧ ಕಾವಲು ಕಾಯುತ್ತದೆ .

ನೀವು ಎಷ್ಟು ಮಾಯಿಶ್ಚರೈಸರ್ ಬಳಸಬೇಕು ಎಂಬುದು ಋತು , ತಾಪಮಾನ ಮತ್ತು ನಿಮ್ಮ ಚರ್ಮದ ಪ್ರಕಾರವನ್ನು ಅವಲಂಬಿಸಿರುತ್ತದೆ. ನಿಮ್ಮ ಚರ್ಮವು ನೈಸರ್ಗಿಕವಾಗಿ ಎಣ್ಣೆಯಾಗಿದ್ದರೆ, ನೀವು ಅಲ್ಪ ಪ್ರಮಾಣದಲ್ಲಿ ಬಳಸಬೇಕು, ಚರ್ಮಕ್ಕೆ ಸಮವಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಹೆಚ್ಚು ಬಳಸುವುದರಿಂದ ತೈಲತ್ವ ಹೆಚ್ಚಾಗಿ ಮೊಡವೆಗಳು ಮೂಡಬಹುದು .  ನಿಮ್ಮ ಚರ್ಮವು ನೈಸರ್ಗಿಕವಾಗಿ ಒಣಗಿದ್ದರೆ,  ನೀವು ಸ್ವಲ್ಪ ಹೆಚ್ಚಾಗಿ ಇದನ್ನು ಬಳಸಬೇಕಾಗಬಹುದು .

ಎಲ್ಲಾ ಚರ್ಮದ ಪ್ರಕಾರಗಳಿಗೆ, ಛಳಿಗಾಲದಲ್ಲಿ  ಬಳಸುವ ಪ್ರಮಾಣವನ್ನು ಹೆಚ್ಚಿಸಬಹುದು, ಏಕೆಂದರೆ ಕಡಿಮೆ ತಾಪಮಾನವು ಚರ್ಮದಿಂದ ಉತ್ಪತ್ತಿಯಾಗುವ ನೈಸರ್ಗಿಕ ತೈಲಗಳ ಸ್ರಾವ ಕಡಿಮೆಯಿರುತ್ತದೆ .

ಲೇಖಕಿ : ಡಾ|| ಸವಿತಾ ಸೂರಿ ಆಯುರ್ವೇದ ವೈದ್ಯೆ , ಆಹಾರ ತಜ್ಞೆ  

Free Ayurvedic Consultation
Call us at +91 9945995660 / +91 9448433911
Whats App + 91 6360108663/

Leave a Reply

Close Menu