ಅಜೀರ್ಣಕ್ಕೆ ಆಯುರ್ವೇದ ಚಿಕಿತ್ಸೆ ಮತ್ತು ಮನೆ ಮದ್ದು home remedies for indigestion in kannada

ಅಜೀರ್ಣಕ್ಕೆ ಆಯುರ್ವೇದ ಚಿಕಿತ್ಸೆ ಮತ್ತು ಮನೆ ಮದ್ದು home remedies for indigestion in kannada

ಅಜೀರ್ಣವನ್ನು ಆಯುರ್ವೇದದಲ್ಲಿ ಅಗ್ನಿಮಾಂದ್ಯ ಎಂದು ಕರೆಯಲಾಗುತ್ತದೆ. ಆಯುರ್ವೇದವು ಹಿಂಗ್ವಾಷ್ಟಕ, ವಿಭೀತಕಿ, ಲವಂಗ, ದಾಲ್ಚಿನ್ನಿ ಮುಂತಾದ ವಿವಿಧ ಔಷಧಿಗಳನ್ನು ಮನೆ ಮದ್ದು ಮತ್ತು ಚಿಕಿತ್ಸೆಯಲ್ಲಿ ಬಳಸಲು ಶಿಫಾರಸು ಮಾಡುತ್ತದೆ.

ವಿಷಯ ಸೂಚಿ

ಆಯುರ್ವೇದದಲ್ಲಿ ಅಜೀರ್ಣ ಅಥವಾ ಅಗ್ನಿಮಾಂದ್ಯದ ಮಹತ್ವ

ಅಜೀರ್ಣಕ್ಕೆ ಗಿಡಮೂಲಿಕೆಗಳು ಮತ್ತು ಮನೆಮದ್ದು

ಅಜೀರ್ಣದ ಸಮಯದಲ್ಲಿ ಏನು ಮಾಡಬೇಕು?

ಅಜೀರ್ಣಕ್ಕೆ ಆಯುರ್ವೇದ ಚಿಕಿತ್ಸೆಗಳು ಮತ್ತು ಮನೆಮದ್ದುಗಳು

Read this article in English Ayurvedic Treatment and Home Remedies for Indigestion

ಆಯುರ್ವೇದದಲ್ಲಿ ಅಜೀರ್ಣ ಅಥವಾ ಅಗ್ನಿಮಾಂದ್ಯದ ಮಹತ್ವ

ಅಜೀರ್ಣವು ಜೀರ್ಣಾಂಗ ವ್ಯವಸ್ಥೆಯ ಸಾಮಾನ್ಯ ಖಾಯಿಲೆಯಾಗಿದೆ. ಈ ಸ್ಥಿತಿಯನ್ನು ಆಯುರ್ವೇದದಲ್ಲಿ ಅಗ್ನಿಮಾಂದ್ಯ ಎಂದು ಕರೆಯಲಾಗುತ್ತದೆ. ಇದರಿಂದ ಮಲಬದ್ಧತೆ ಅಥವಾ ಅತಿಸಾರ (ಭೇದಿ), ಹೊಟ್ಟೆಯು ಉಬ್ಬರಿಸುವುದು , ವಾಯು ಮತ್ತು ಹಸಿವಿನ ಕೊರತೆ ಉಂಟಾಗಬಹುದು.

ಆಯುರ್ವೇದ ಆಚಾರ್ಯರು ಅಜೀರ್ಣವು ರೋಗಗಳಿಗೆ ಮೂಲ ಕಾರಣವಾಗಿದೆ ಎಂದು ಹೇಳುತ್ತಾರೆ.

ಅಜೀರ್ಣಕ್ಕೆ ಗಿಡಮೂಲಿಕೆಗಳು ಮತ್ತು ಮನೆಮದ್ದು

ವಿಭೀತಕಿ (ಬಿಭಿತಾಕಿ) ಅಥವಾ ತಾರೆಕಾಯಿ – ಟರ್ಮಿನಲಿಯಾ ಬೆಲ್ಲಿರಿಕಾ
ಏಲಕ್ಕಿ
ಲವಂಗ
ಸೋಂಪು (fennel or Saunf)
ಬೆಳ್ಳುಳ್ಳಿ
ಶುಂಠಿ

ವಿಭೀತಕಿ (ಬಿಭಿತಾಕಿ) ಅಥವಾ ತಾರೆಕಾಯಿ – ಟರ್ಮಿನಲಿಯಾ ಬೆಲ್ಲಿರಿಕಾ

ವಿಭೀತಕಿ ತ್ರಿಫಲಾ ಚೂರ್ಣದ ಅತ್ಯಂತ ಪ್ರಬಲವಾದ ಘಟಕಾಂಶವಾಗಿದೆ. ಇದು ಅದ್ಭುತವಾಗಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ . ಅಲ್ಲದೆ ಅತಿಸಾರ (ಭೇದಿ) ಮತ್ತು ಅಜೀರ್ಣ ಸಮಸ್ಯೆಗಳನ್ನು ಪರಿಹರಿಸುತ್ತದೆ. ಕರುಳಿನಲ್ಲಿ ಹುಳುಗಳಿರುವಾಗ ಇದನ್ನು ತೆಗೆದುಕೊಳ್ಳಬಹುದು,

ಏಲಕ್ಕಿ (cardamom)

ಏಲಕ್ಕಿ , ಜೀರ್ಣವಾಗದ ಆಹಾರದಿಂದ ಉಂಟಾಗುವ ಹೊಟ್ಟೆ ಭಾರ ಶಮನಗೊಳಿಸಲು ಮತ್ತು ವಾಯುವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುತ್ತದೆ .

ಲವಂಗ (Clove)

ಲವಂಗವು ಜೀರ್ಣ ರಸಗಳು ಸ್ರಾವವಾಗುವಂತೆ ಉತ್ತೇಜಿಸುತ್ತದೆ . ಹೀಗೆ ಸ್ರಾವವಾದ ಜೀರ್ಣ ರಸಗಳಲ್ಲಿರುವ ಕಿಣ್ವಗಳಿಂದ ಜೀರ್ಣಕ್ರಿಯೆ ಸಲೀಸಾಗಿ ಆಗಿ ಅಜೀರ್ಣ ನಿವಾರಣೆಯಾಗುತ್ತದೆ.

ಸೋಂಪು ಕಾಳು (Fennel seeds or Saunf)

fennel tea health benefits in kannada, fennel seeds in kannada, fennel seeds health benefits in kannada

ಅಜೀರ್ಣ ತಡೆಗಟ್ಟುವಲ್ಲಿ ಸೋಂಪು ಕಾಳುಗಳು ಅತ್ಯಂತ ಪರಿಣಾಮಕಾರಿಯಾಗಿವೆ . ಸಾಂಪ್ರದಾಯಿಕವಾಗಿ, ಸಕ್ಕರೆಯೊಂದಿಗೆ ಸಿಹಿಗೊಳಿಸಿದ ಸೋಂಪು ಬೀಜಗಳನ್ನು ಪ್ರತಿ ಊಟದ ನಂತರ ನೀಡಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ . ಬಾಯಿಯಿಂದ ಬರುವ ದುರ್ಗಂಧ ನಿವಾರಿಸುತ್ತದೆ .

ಬೆಳ್ಳುಳ್ಳಿ

ಬೆಳ್ಳುಳ್ಳಿ ಜೀರ್ಣಕಾರಿ ಕಿಣ್ವಗಳ ವೇಗವಾಗದ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯಿಂದ ತ್ಯಾಜ್ಯ ವಸ್ತುಗಳನ್ನು ಹೊರಹಾಕುತ್ತದೆ. ನಂಜುನಿರೋಧಕ ಗುಣಲಕ್ಷಣಗಳಿಂದಾಗಿ, ಬೆಳ್ಳುಳ್ಳಿ ಜಠರ ಮತ್ತು ಕರುಳಿನ ಕಾಯಿಲೆಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಯಾವುದೇ ಕರುಳಿನ ಹುಳುಗಳನ್ನು ಸಹ ಹೊರಹಾಕುತ್ತದೆ. ಅಜೀರ್ಣದ ಸಮಯದಲ್ಲಿ ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಬಳಸುವುದು (ಬೆಳ್ಳುಳ್ಳಿ ಹಾಲು) ಉತ್ತಮ .

ಶುಂಠಿ

ಅಜೀರ್ಣಕ್ಕೆ ಆಯುರ್ವೇದ ಚಿಕಿತ್ಸೆ ಮತ್ತು ಮನೆ ಮದ್ದು home remedies for indigestion in kannada

ಎಲ್ಲಾ ರೀತಿಯ ಜಠರ ಮತ್ತು ಕರುಳಿನ ಕಾಯಿಲೆಗಳ ಚಿಕಿತ್ಸಗಳಲ್ಲಿ ಶುಂಠಿ ಬಹಳ ಪರಿಣಾಮಕಾರಿ. ಇದು ಉದರಶೂಲೆ, ವಾಯು, ಅತಿಸಾರ, ಭೇದಿ, ಹೊಟ್ಟೆ ನೋವು ಮತ್ತು ಬಾಯಿಯ ರುಚಿ ಇಲ್ಲದೇ ಇರುವುದು ಇಂತಹ ಸಂಧರ್ಭಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ .

ಅಜೀರ್ಣದ ಸಮಯದಲ್ಲಿ ಏನು ಮಾಡಬೇಕು

ಅಜೀರ್ಣವನ್ನು ದೂರವಿಡಲು ಸರಿಯಾದ ಆಹಾರ ಕ್ರಮವನ್ನು ಹೊಂದಿರುವುದು ಅವಶ್ಯಕ . ಕೆಳಗಿನ ಮಾರ್ಗಸೂಚಿಗಳನ್ನು ಪಾಲಿಸಿ .
ಬಹಳ ಲಘುವಾದ ಆಹಾರ ಸೇವಿಸಿ .
ಮೊಸರು ಮತ್ತು ಮಜ್ಜಿಗೆ ಬಳಸಿ
ಬೆಚ್ಚಗಿನ ನೀರನ್ನು ಕುಡಿಯಿರಿ

ಬಹಳ ಲಘುವಾದ ಆಹಾರ ಸೇವಿಸಿ .

ಅಜೀರ್ಣ ಸಮಸ್ಯೆ ಇರುವಾಗ ಹೊಟ್ಟೆಗೆ ಭಾರವಾಗುವ ಆಹಾರವನ್ನು ಸೇವಿಸಬೇಡಿ. ಸಸ್ಯಾಹಾರಿ ಆಹಾರ ಕ್ರಮ ಅನುಸರಿಸಿ ಮತ್ತು ಹೆಚ್ಚಾಗಿ ನಾರು ಇರುವಂತಹ ತರಕಾರಿಗಳನ್ನು ಸೇವಿಸಿ . ವಾರಕ್ಕೆ ಒಂದು ದಿನ ಉಪವಾಸ ಮಾಡುವುದು ಬಹಳ ಒಳ್ಳೆಯ ಅಭ್ಯಾಸ . ಈ ಉಪವಾಸದ ದಿನ, ನೀವು ತಾಜಾ ಹಣ್ಣಿನ ರಸಗಳಂತಹ ದ್ರವ ಆಹಾರಗಳನ್ನು ಸೇವಿಸಬಹುದು. ಸಂಸ್ಕರಿಸಿದ ಅಥವಾ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿರುವ ಯಾವುದೇ ದ್ರವಗಳನ್ನು ಸೇವಿಸಬೇಡಿ.

ಮೊಸರು ಅಥವಾ ಮಜ್ಜಿಗೆಯನ್ನು ಬಳಸಿ

ಜೀರ್ಣಕ್ರಿಯೆಗೆ ಸಹಾಯ ಮಾಡುವಲ್ಲಿ ಮಜ್ಜಿಗೆ ಮತ್ತು ಮೊಸರಿನ ಪಾತ್ರ ಬಹಳ ಹಿರಿದು . ಅಜೀರ್ಣದ ಸಮಯದಲ್ಲಿ, ಮಜ್ಜಿಗೆಯಲ್ಲಿ ಸ್ವಲ್ಪ ಅನ್ನವನ್ನು ಸೇವಿಸಿ, ಅಥವಾ ಮೊಸರು ಮತ್ತು ಸಕ್ಕರೆಯನ್ನು ಸೇವಿಸಿ. ಅಜೀರ್ಣಕ್ಕೆ ಇದು ಅತ್ಯಂತ ಸೂಕ್ತವಾದ ಊಟ . ಆದರೆ ರಾತ್ರಿಯಲ್ಲಿ ಮೊಸರು ಅಥವಾ ಮಜ್ಜಿಗೆ ಬಳಸಬೇಡಿ.

ಬೆಚ್ಚಗಿನ ನೀರನ್ನು ಕುಡಿಯಿರಿ

ಪ್ರತಿ ದಿನ 6 ರಿಂದ 7 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಸುವ್ಯವಸ್ಥಿತವಾಗಿರುತ್ತದೆ . ಅಲ್ಲದೆ ಬಿಸಿ ನೀರು ಕುಡಿಯುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ . ಇದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿನ ಕಲ್ಮಶಗಳನ್ನು ತೆರವುಗೊಳಿಸಿ ಅವನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ .

ಅಜೀರ್ಣಕ್ಕೆ ಮನೆಮದ್ದು

ಜೀರ್ಣಕಾರಿ ಪದಾರ್ಥಗಳಾದ ಸೋಂಪು, ಶುಂಠಿ, ಜೀರಿಗೆ ಮತ್ತು ಪಿಪ್ಪಲಿ (ಹಿಪ್ಪಲಿ ) ಇವಿಷ್ಟನ್ನೂ (ಎಲ್ಲವೂ ಸೇರಿಸಿ ಒಂದು ಟೀ ಚಮಚದಷ್ಟು ಪುಡಿಯಾಗಬೇಕು) ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಅಜೀರ್ಣಕ್ಕೆ ಒಳ್ಳೆಯ ಮನೆ ಮದ್ದು . ಅಜೀರ್ಣ ಸಮಸ್ಯೆ ಇದ್ದಾಗಲೆಲ್ಲಾ ಇದನ್ನು ಸೇವಿಸಿ.

ಒಂದು ವಿಳ್ಳೇದೆಲೆ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಅದರ ಮೇಲೆ ಒಂದು ಚಿಟಿಕೆ ಕಲ್ಲು ಉಪ್ಪು ಅಥವಾ ಸೈನ್ಧವ ಲವಣ ಇರಿಸಿ. ಎಲೆಯನ್ನು ಮಡಚಿ ಬಾಯಿಯಲ್ಲಿ ಇಟ್ಟುಕೊಂಡು ನಿಧಾನವಾಗಿ ಅಗಿಯಿರಿ. ಇದು ಹೊಟ್ಟೆ ಭಾರ ಮತ್ತು ಅಜೀರ್ಣವನ್ನು ಕಡಿಮೆ ಮಾಡುತ್ತದೆ

ಒಂದು ಟೀಸ್ಪೂನ್ ಪ್ರಮಾಣದಷ್ಟು ಕೊತ್ತಂಬರಿ ಬೀಜಗಳನ್ನು ಒಂದು ಲೋಟ ಮಜ್ಜಿಗೆಯಲ್ಲಿ ನೆನೆಸಿ. ಇದನ್ನು ಐದರಿಂದ ಆರು ಗಂಟೆಗಳ ಕಾಲ ನೆನೆಯಲು ಬಿಡಿ . ಈ ಮಿಶ್ರಣವನ್ನು ಸೇವಿಸುವುದರಿಂದ ಅಜೀರ್ಣವನ್ನು ತ್ವರಿತವಾಗಿ ನಿವಾರಿಸಲು ಸಹಾಯ ಮಾಡುತ್ತದೆ.

ಊಟದ ನಂತರ ಹೊಟ್ಟೆ ಭಾರವಾದರೆ , ಎರಡು ಅಥವಾ ಮೂರು ಲವಂಗದ ತುಂಡುಗಳನ್ನು ಅಥವಾ ಅರ್ಧ ಚಮಚದಷ್ಟು ಜೀರಿಗೆಯನ್ನೋ ಅಥವಾ ಸೋಂಪು ಕಾಳುಗಳನ್ನು ಬಾಯಿಗೆ ಹಾಕಿಕೊಂಡು ನಿಧಾನವಾಗಿ ಜಗಿಯಿರಿ . ಇದು ಜೀರ್ಣಕ್ರಿಯೆಯು ವೇಗವಾಗಿ ನಡೆಯಲು ಸಹಾಯ ಮಾಡುತ್ತದೆ.

Free Ayurvedic Consultation

Call us at  +91 9945995660 / +91 9448433911

Whats App + 91 6360108663/

Leave a Reply