ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳು. ghee benefits in kannada

ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳು. ghee benefits in kannada

ತುಪ್ಪಕ್ಕೆ ಆಯುರ್ವೇದದಲ್ಲಿ ಮಹತ್ತರ ಸ್ಥಾನವಿದೆ . ತುಪ್ಪ ಒಣಕೆಮ್ಮಿಗೆ, ನೆನಪಿನ ಶಕ್ತಿ ಹೆಚ್ಚಿಸಲು, ತಲೆಗೂದಲ ಬೆಳವಣಿಗೆಗೆ, ಲೈಂಗಿಕ ಶಕ್ತಿ ಹೆಚ್ಚಿಸಲು , ಹೀಗೆ ಅನೇಕ ತೊಂದರೆಗಳಿಗೆ ಮನೆ ಮದ್ದಾಗಿದೆ . ಇವೆಲ್ಲವನ್ನೂ ಹಾಗು  ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳನ್ನು ( ghee benefits in kannada) ಇಲ್ಲಿ ವಿವರಿಸಲಾಗಿದೆ .

ತುಪ್ಪ ಹಾಗು ಆಯುರ್ವೇದ

ghee benefits in kannada, ತುಪ್ಪ, benefits of ghee in kannada

ತುಪ್ಪದ ಔಷಧೀಯ ಉಪಯೋಗಗಳ ಬಗ್ಗೆ ಆಯುರ್ವೇದದಲ್ಲಿ ಬಹಳವಾಗಿ ಪ್ರಶಂಸಿಸಲಾಗಿದೆ. ಆಯುರ್ವೇದದಲ್ಲಿ ಅನೇಕ ಬಗೆಯ ತುಪ್ಪಗಳ ಬಗ್ಗೆ ಉಲ್ಲೇಖ ಇದೆ. ಹಸುವಿನ , ಎಮ್ಮೆಯ, ಆಡಿನ, ಒಂಟೆಯ ಹಾಲಿನ ತುಪ್ಪಗಳ ಔಷಧೀಯ ಗುಣಗಳನ್ನು ವರ್ಣಿಸಿದ್ದಾರೆ. ಇದಲ್ಲದೆ ಹೊಸದಾದ ತುಪ್ಪ ಅಥವಾ ನವೀನ ಗ್ರುತ ಹಾಗೂ ಹಳೆಯ ತುಪ್ಪ ಅಥವಾ ಪುರಾಣ ಗ್ರುತ , ಎಂಬ ಇನ್ನು ಅನೇಕ ಬಗೆಗಳಿವೆ.

ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಿ , ಕಡೆದು, ಅದರಿಂದ ಬೆಣ್ಣೆ ತೆಗೆದು, ಆ ಬೆಣ್ಣೆಯನ್ನು ಕಾಯಿಸಿ ತೆಗೆದ ತುಪ್ಪವೆ ಶ್ರೇಷ್ಠ.
ಆಯುರ್ವೇದ ದ ನಿಯಮಾನುಸಾರ ತುಪ್ಪ ಮಧುರವಾಗಿರುತ್ತದೆ. ಇದು ಜೀರ್ಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಹಾಗೂ ದೇಹಕ್ಕೆ ತಂಪನ್ನು ಉಂಟು ಮಾಡುತ್ತದೆ. ವಾತ ದೋಷ ಹಾಗೂ ಪಿತ್ತ ದೋಷಗಳು ಇದರಿಂದ ಕಡಿಮೆಯಾಗುತ್ತವೆ.

ತುಪ್ಪದ ಔಷಧೀಯ ಗುಣಗಳನ್ನು ಆಯುರ್ವೇದ ಹೀಗೆ ವಿವರಿಸುತ್ತದೆ.

ghee benefits in kannada, ತುಪ್ಪ, benefits of ghee in kannada

 • ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ
 • ಜೀರ್ಣ ಶಕ್ತಿಯನ್ನು ವೃದ್ಧಿ ಮಾಡಿ ಹಸಿವನ್ನು ಹೆಚ್ಚಿಸುತ್ತದೆ.
 • ಪ್ರತಿದಿನವೂ ತುಪ್ಪವನ್ನು ಸೇವಿಸುತ್ತಿದ್ದರೆ ದೇಹದ ಅಂಗಾಂಶಗಳು ಮೃದುವಾಗಿ ದೇಹದ ಚಲನವಲನಗಳು ಸುಲಲಿತವಾಗಿ ನಡೆಯುತ್ತವೆ.
 • ತುಪ್ಪ ಮಲಭದ್ದತೆಯನ್ನು ನಿವಾರಿಸುತ್ತದೆ
 • ಇದನ್ನು ಮಿತಿಯಲ್ಲಿ ಬಳಸಿದರೆ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು
 • ಘೃತ ಶುಕ್ರ ಧಾತುವನ್ನು ಆರೋಗ್ಯಕರವಾಗಿರುವಂತೆ ಮಾಡಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸುತ್ತದೆ.
 • ಆಯುರ್ವೇದ ಆಚಾರ್ಯರು ಇದನ್ನು ಪುರುಷರಿಗೆ ನಿಮಿರು ದೌರ್ಬಲ್ಯದಲ್ಲೂ ಉಪಯೋಗಿಸುವಂತೆ ಸಲಹೆ ನೀಡುತ್ತಾರೆ
 • ಇದನ್ನು ಪ್ರತಿದಿನ ಉಪಯೋಗಿಸುವುದರಿಂದ ಚರ್ಮದ ಕಾಂತಿ ಹಾಗೂ ಹೊಳಪು ಹೆಚ್ಚಾಗುತ್ತದೆ.
 • ಕಣ್ಣುಗಳ ಆರೋಗ್ಯ ಹೆಚ್ಚಿಸುತ್ತದೆ.
 • ತಲೆ ಕೂದಲಿಗೂ ಬಹಳ ಒಳ್ಳೆಯದು.
 • ಸರ್ಪಸುತ್ತು ಅಥವಾ ಹರ್ಪಿಸ್ ರೋಗಕ್ಕೆ ಇದು ರಾಮಬಾಣ
 • ಗಾಯವನ್ನು ಬೇಗನೆ ಮಾಯುವಂತೆ ಮಾಡಿ ಒಣಗಿಸುತ್ತದೆ.

ಉತ್ತಮ ಆರೋಗ್ಯಕ್ಕೆ ತುಪ್ಪ ಬಳಸುವುದು ಹೇಗೆ ? ತುಪ್ಪದಿಂದ ಉಪಯುಕ್ತವಾದ ಮನೆ ಮದ್ದುಗಳು

ನೆನಪಿನ ಶಕ್ತಿ ಹೆಚ್ಚಿಸಲು

ghee benefits in kannada, ತುಪ್ಪ, benefits of ghee in kannada

2 ಬಟ್ಟಲು ಮಂಡೂಕ ಪರ್ಣಿ ಅಥವಾ ಒಂದೆಲಗ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಇದನ್ನು 5 ಟೀ ಚಮಚ ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ.ಒಂದು ಗಾಜಿನ ಭರಣಿಯಲ್ಲಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿ ಶೇಖರಿಸಿಡಿ. ಪ್ರತಿ ದಿನ ಬಿಸಿ ಅನ್ನದ ಜೊತೆ ಇದನ್ನು ಒಂದು ಚಮಚದಷ್ಟು ಕಲಿಸಿಕೊಂಡು ತಿನ್ನಿ. ಇದಕ್ಕೆ ಸೈನ್ಧ ವ ಉಪ್ಪು ಸಹ ಬೆರೆಸಿಕೊಳ್ಳಬಹುದು.

ಒಣ ಕೆಮ್ಮಿಗೆ ತುಪ್ಪದ ಮನೆ ಮದ್ದು

ghee benefits in kannada, ತುಪ್ಪ, benefits of ghee in kannada

ಯಾವುದಕ್ಕೂ ಬಗ್ಗದ ಒಣ ಕೆಮ್ಮಿದ್ದಾಗ ಈ ಮನೆ ಮದ್ದು ಮಾಡಿ . ಒಂದು ಲೋಟ ಹಾಲನ್ನು ಬಿಸಿ ಮಾಡಿ . ಅದು ಕುಡಿಯಲು ಬಂದಾಗ ಒಂದು ಚಿಟಿಕೆ ಅರಿಶಿಣ ಹಾಕಿ . ಇದಕ್ಕೆ ಒಂದು ಟೀ ಚಮಚ ಕೆಂಪು ಕಲ್ಲು ಸಕ್ಕರೆ ಹಾಕಿ , ಹಾಲನ್ನು ಕೆಳಗಿಳಿಸಿ . ಇದನ್ನು ಚಿನ್ನದ ಹಾಲು ( Golden milk or Turmeric Milk ) ಎಂದು ಹೇಳುತ್ತಾರೆ . ಇದಕ್ಕೆ ಒಂದು ಚಮಚ ತುಪ್ಪ ಹಾಕಿ ಕುಡಿಯುವ ಹದಕ್ಕೆ ಆರಿಸಿ , ರಾತ್ರಿ ಹಾಗು ಬೆಳಗ್ಗೆ ಕುಡಿಯಿರಿ . ಇದಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ ಚೂರುಗಳನ್ನೂ ಸಹ ಸೇರಿಸಬಹುದು .ಈ ಹಾಲು ನಿದ್ರಾಹೀನತೆಗೆ ಒಳ್ಳೆಯ ಆಯುರ್ವೇದೀಯ ಚಿಕಿತ್ಸೆ .

ಒಣ ಕೂದಲಿಗೆ ಮತ್ತು ಬಿರಿದ ಕೂದಲ ತುದಿಗಳಿಗೆ ಮನೆ ಮದ್ದು

ghee benefits in kannada, ತುಪ್ಪ, benefits of ghee in kannada

ಒಂದು ಟೀ ಚಮಚ ತುಪ್ಪಕ್ಕೆ ೨ ಟೀ ಚಮಚ ಪರಿಶುದ್ಧ ತೆಂಗಿನೆಣ್ಣೆ ಬೆರೆಸಿ ಸ್ವಲ್ಪವೇ ಬಿಸಿ ಮಾಡಿ . ಇದಕ್ಕೆ ೮ರಿಂದ ೧೦ ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ. ಇದು ಸ್ವಲ್ಪ ಆರಿದ ಮೇಲೆ ಕೂದಲಿನ ತುದಿಗೆ ಹಚ್ಚಿ . ಇದರೊಡನೆ ಪ್ರತಿ ದಿನ ೨ ಟೀ ಚಮಚದಷ್ಟು ತುಪ್ಪ ಸೇವಿಸಿ .

ಮಲಬದ್ಧತೆಗೆ ಹಾಗು ಗರ್ಭಿಣಿಯರಲ್ಲಿನ ಮಲಬದ್ಧತೆಗೆ ಪರಿಹಾರ

ghee benefits in kannada, ತುಪ್ಪ, benefits of ghee in kannada

ಮಲಭದ್ದತೆ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ . ಇದಕ್ಕೆ ಪರಿಹಾರವಾಗಿ ಒಂದು ಚಮಚ ತುಪ್ಪವನ್ನು ಒಂದು ಲೋಟ ಬಿಸಿನೀರಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ಹಾಗು ರಾತ್ರಿ ಕುಡಿಯುವದರಿಂದ ಮಲಭದ್ದತೆ ನಿವಾರಣೆಯಾಗುತ್ತದೆ . ಈ ಮನೆ ಮದ್ದು ವಯಸ್ಕರಿಗೆ , ಮಕ್ಕಳಿಗೆ ಹಾಗು ಹಿರಿಯರಿಗೂ ಉಪಯುಕ್ತ .

Free Ayurvedic Consultation

Call us at  +91 9945995660 / +91 9448433911

Whats App + 91 6360108663/

 

Increase Erection Kit

Ayurvedic Medicines to increase erection

Increase Libido Kit

ayurvedic medicine to increase libido

Increase Sperm Kit

Increase Sperm Count Kit

Diabetic vajikarana Therapy Combo

Vajikarana Therapy for Diabetic Men

Complete Vajikarana Therapy

Ayurveda Vajikarana therapy

Obesity and Erectile Dysfunction solution

Vajikarana Therapy for Obese Men

Premature Ejaculation Ayurvedic Remedy

Ayurvedic Medicine for ED and PE

Stallion Penis Massage Oil

Ayurvedic pennis massage oil

 

Rejuzoa Ayurvedic Capsules for Erectile Dysfunction

Ayurvedic capsules for Erectile dysfunction

Ashwagandha Capsules

Buy ashwagandha capsules online

Gokshura (tribulus) capsules

Buy gokshura Capsules

Vajikarana Rasayana

Vajikarana Rasayana for men

Supraja Lehya to Increase sperm count

Ayurvedic Indian Medicine to Increase Sperm Count

 Vajimix-Aphrodisiac Powder

 Vajimix-ayurvedic Aphrodisiac Powder

Leave a Reply