ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಉಪಯೋಗಗಳು – Garlic Benefits in Kannada

ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಉಪಯೋಗಗಳು – Garlic Benefits in Kannada

ಆಯುರ್ವೇದವು ನಿಮಿರು ದೌರ್ಬಲ್ಯ , ಮಧುಮೇಹ, ಪಿ ಸಿ ಓ ಎಸ್ , ಹೆಚ್ಚಿದ ದೇಹದ ತೂಕ ಮತ್ತು ದುರ್ಬಲವಾದ ವೀರ್ಯ ಹಾಗು ವೀರ್ಯಾಣುಗಳು ಮುಂತಾದ ಸಂದರ್ಭಗಳಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸುವಂತೆ ಶಿಫಾರಸು ಮಾಡುತ್ತದೆ.

garlic kannada, bellulli in English, garlic uses in kannada, garlic benefits in kannada, ಬೆಳ್ಳುಳ್ಳಿ in english, ಬೆಳ್ಳುಳ್ಳಿ in english word

ಬೆಳ್ಳುಳ್ಳಿಯನ್ನು ಆಯುರ್ವೇದದಲ್ಲಿ ವಿವಿಧ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಈ ಹೆಸರುಗಳು ಅದರ ಗುಣಗಳನ್ನು ವಿವರಿಸುತ್ತವೆ . ಇದನ್ನು ರಾಸೋನಾ ಎಂದು ಕರೆಯಲಾಗುತ್ತದೆ (ರಸೇನಾ ವುನಾಹಾ = ಇದು ಆಮ್ಲಾ ರಸ ಅಥವಾ ಹುಳಿ ರುಚಿಯಿಂದ ದೂರವಿರುವುದರಿಂದ), ಉಗ್ರಗಂಧಿ (ಉಗ್ರ ಗಂಧಿ = ಇದು ಬಲವಾದ ವಾಸನೆಯನ್ನು ಹೊಂದಿರುವುದರಿಂದ)

ಬೆಳ್ಳುಳ್ಳಿಯ ಆಯುರ್ವೇದೀಯ ಔಷಧೀಯ ಗುಣಲಕ್ಷಣಗಳು ಹಾಗು ಪ್ರಯೋಜನಗಳು,

(Read this article in English – Health Benefits of Garlic in Ayurveda )

ಆಯುರ್ವೇದದ ಗ್ರಂಥಗಳು ಈ ಮೂಲಿಕೆಯ ಔಷಧೀಯ ಗುಣಗಳನ್ನು ಈ ಕೆಳಗಿನಂತೆ ವಿವರಿಸುತ್ತವೆ .

garlic kannada, bellulli in English, garlic uses in kannada, garlic benefits in kannada, ಬೆಳ್ಳುಳ್ಳಿ in english, ಬೆಳ್ಳುಳ್ಳಿ in english word

ಇದು ದೇಹದಲ್ಲಿ ಜಿಗುಟುತನವನ್ನು ಹೆಚ್ಚಿಸಿ ಕೀಲುಗಳ ಹಾಗು ಮಾಂಸಗಳ ಚಲನೆ ಸುಲಭವಾಗುವಂತೆ ಮಾಡುತ್ತದೆ (ಸ್ನಿಗ್ಧಾ), ದೇಹದ ಉಷ್ಣಾ೦ಶ ಹೆಚ್ಚಿಸುತ್ತದೆ (ಉಷ್ಣ ವೀರ್ಯ )ಇದರ ಔಷಧೀಯ ಗುಣಗಳು ತೀಕ್ಷ್ಣವಾಗಿದ್ದು ದೇಹದ ಜೀವಕೋಶಗಳವರೆಗೂ ತಲುಪುತ್ತದೆ (ತೀಕ್ಷ್ಣ)ಬೆಳ್ಳುಳ್ಳಿ ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟ (ಗುರು). ಇದರ ಔಷಧೀಯ ಅಂಶಗಳು ದೇಹದಲ್ಲಿ (ಸರಾ) ಬಹಳ ಬೇಗನೆ ಹರಡುತ್ತವೆ. ಇದು 5 ರಸ ಹೊಂದಿದೆ – ಮಧುರ ರಸ, (ಸಿಹಿ ರುಚಿ) , ಕಟು ರಸ (ಖಾರ ), ತಿಕ್ತ ರಸ (ಕಹಿ), ಕಶಾಯ ರಸ (ಸಂಕೋಚಕ) ಮತ್ತು ಲವಣ ರಸ (ಉಪ್ಪು) ಹೊಂದಿದೆ. ಆದರೆ ಬೆಳ್ಳುಳ್ಳಿಯಲ್ಲಿ ಆಮ್ಲ ರಸ (ಹುಳಿ ರುಚಿ) ಇರುವುದಿಲ್ಲ.

ಬೆಳ್ಳುಳ್ಳಿಯ ಔಷಧೀಯ ಪರಿಣಾಮಗಳು

ಆಚಾರ್ಯ ಚರಕ ಹಾಗು ಸುಶ್ರುತರ ಪ್ರಕಾರ ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು ಈ ಕೆಳಗಿನಂತಿವೆ.

ದೋಷಗಳ ಮೇಲೆ ಆಗುವ ಪರಿಣಾಮ

ಇದು ಕಫ ದೋಷ ಮತ್ತು ವಾತ ದೋಷವನ್ನು  ಕಡಿಮೆ ಮಾಡುತ್ತದೆ ಆದರೆ ಪಿತ್ತ ದೋಷವನ್ನು ಉಲ್ಬಣ ಮಾಡುತ್ತದೆ . ಪಿತ್ತ ದೋಷ ಪ್ರಮುಖ ಪ್ರಕೃತಿಯಾಗಿ ಹೊಂದಿರುವ ವ್ಯಕ್ತಿಗಳಲ್ಲಿ ಮತ್ತು ರಕ್ತ – ಪಿತ್ತ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಇದನ್ನು ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ಬಳಸಬೇಕು.

ಪುರುಷರ ಲೈಂಗಿಕ ದೌರ್ಬಲ್ಯದಲ್ಲಿ

ನಿಮಿರು ದೌರ್ಬಲ್ಯ , ಲೈಂಗಿಕ ಶಕ್ತಿ ಹ್ರಾಸ , ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದು ಇವೆಲ್ಲಕ್ಕೂ ಬೆಳ್ಳುಳ್ಳಿ ಅತಿ ಉತ್ತಮ ಔಷಧಿ. ಮಧುಮೇಹದ ದೆಸೆಯಿಂದ ಉಂಟಾಗುವ ನಿಮಿರು ದೌರ್ಬಲ್ಯದಲ್ಲೂ (Erectile Dysfunction due to Diabetes) ಇದು ಬಹಳ ಉಪಯುಕ್ತವಾಗುತ್ತದೆ.

ಜೀರ್ಣಾಂಗಗಳ ತೊಂದರೆಗಳಿಗೆ

ಬೆಳ್ಳುಳ್ಳಿ ಹಸಿವು ಹಾಗು ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಕ್ರಮಬದ್ಧಗೊಳಿಸುತ್ತದೆ.ಇದರಿಂದ ಮಲಭದ್ದತೆಯ ತೊಂದರೆ ನಿವಾರಣೆಯಾಗುತ್ತದೆ . ಕರುಳಿನಲ್ಲಿ ಸೇರಿಕೊಳ್ಳುವ ಪರಾವಲಂಬಿ ಕ್ರಿಮಿಗಳಿಗೆ ಇದು ಮಾರಕವಾಗುತ್ತದೆ.

ಚರ್ಮದ ತೊಂದರೆಗಳಿಗೆ

ಬೆಳ್ಳುಳ್ಳಿಯು ಚರ್ಮದ ತೊಂದರೆಗಳಿಗೆ ಬಹಳ ಒಳ್ಳೆಯ ಔಷಧಿ . ಆದರೆ ಇದನ್ನು ನೇರವಾಗಿ ಚರ್ಮಕ್ಕೆ ಸೋಕಿಸಬಾರದು . ಇದರಲ್ಲಿನ ಆಮ್ಲೀಯ ಅಂಶ ಚರ್ಮವನ್ನು ಸುಡುತ್ತದೆ . ಆದರೆ ಇದನ್ನು ಹೊಟ್ಟೆಗೆ ಸೇವಿಸುವುದರಿಂದ ಸೋರಿಯಾಸಿಸ್ , ಮೊಡವೆ , ಎಗ್ಜಿಮಾ ಮುಂತಾದ ಚರ್ಮದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯನ್ನು ನಿರಂತರವಾಗಿ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ .

ರಕ್ತದಲ್ಲಿನ ಕೊಲೆಸ್ಟರೋಲ್ ಕಡಿಮೆ ಮಾಡುತ್ತದೆ

ರಸೋನ, ರಕ್ತದಲ್ಲಿನ ಕೊಬ್ಬಿನ ಅಂಶ ಹಾಗು ರಕ್ತದೊತ್ತಡ ಕಡಿಮೆಯಾಗುವಂತೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಬೆಳ್ಳುಳ್ಳಿಯ ಮತ್ತಷ್ಟು ಔಷಧೀಯ ಗುಣಗಳು

ಇವಿಷ್ಟೇ ಅಲ್ಲದೆ

  • ನೆನಪಿನ ಶಕ್ತಿ ಹೆಚ್ಚಿಸಿ, ಕಣ್ಣುಗಳ ಹಾಗು ಧ್ವನಿ ಪೆಟ್ಟಿಗೆಯ ಆರೋಗ್ಯ ಕಾಪಾಡುತ್ತದೆ.
  • ಮೂಳೆಗಳನ್ನು ಮತ್ತು ಕೀಲುಗಳನ್ನು ಬಲಪಡಿಸುತ್ತದೆ,
  • ಮಧುಮೇಹ ಅಥವಾ ರಕ್ತದಲ್ಲಿ ಸಕ್ಕರೆ ಹೆಚ್ಚುವುದನ್ನೂ (diabetes) ತಡೆಯುತ್ತದೆ .
  • ದೇಹದ ಸ್ಥೂಲತೆ (ದೇಹದ ತೂಕ ಹೆಚ್ಚಾಗುವಿಕೆ ) ಕಡಿಮೆ ಮಾಡುತ್ತದೆ . ದೇಹದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರು ಇದನ್ನು ಉಪಯೋಗಿಸಬಹುದು . (ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಆಯುರ್ವೇದ ಹರ್ಬಲ್ ಟೀ ಗಳು )
  • ಹೆಂಗಸರ ಬಂಜೆತನಕ್ಕೆ ಬಹು ಮುಖ್ಯ ಕಾರಣವಾದ ಪಿ ಸಿ ಓ ಎಸ್ ತೊಂದರೆಗೂ ಬೆಳ್ಳುಳ್ಳಿ ಬಹಳ ಉಪಯುಕ್ತವಾದ ಮನೆ ಮದ್ದು. (Ayurvedic Home Remedies for PCOS )

Free Ayurvedic Consultation

Call us at +91 9945995660 / +91 9448433911

Whats App + 91 6360108663

Leave a Reply