ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು  5 Fruits for Erectile Dysfunction in Kannada

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ಆಯುರ್ವೇದದ ಪಠ್ಯಗಳು ಲೈಂಗಿಕ ಶಕ್ತಿಯನ್ನು ನಿಯಂತ್ರಿಸುವಲ್ಲಿ  ಪ್ರಮುಖ ಅಂಶವಾದ ಶುಕ್ರ ಧಾತುವನ್ನು ಹೆಚ್ಚಿಸುವ ವಿವಿಧ ಹಣ್ಣುಗಳನ್ನು ಶಿಫಾರಸು ಮಾಡುತ್ತವೆ. ಪುರುಷರು ಮತ್ತು ಮಹಿಳೆಯರ ಲೈಂಗಿಕ ಶಕ್ತಿ ಹಾಗು ಆರೋಗ್ಯವನ್ನು ಹೆಚ್ಚಿಸಲು ಆಯುರ್ವೇದ ವೈದ್ಯರು ಶಿಫಾರಸು ಮಾಡಿದ 5 ಸೂಪರ್ ಹಣ್ಣುಗಳ ಪಟ್ಟಿ ಇಲ್ಲಿದೆ.

ವಿಷಯ ಸೂಚಿ

ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ  ಹಣ್ಣುಗಳ ಪ್ರಾಮುಖ್ಯತೆ

ನಿಮಿರು ದೌರ್ಬಲ್ಯಕ್ಕೆ  ಬಾಳೆಹಣ್ಣು

ಗಂಡಸರಿಗೆ ಮಾವು

ಅದ್ಭುತ ದ್ರಾಕ್ಷಿಗಳು

ಪುರುಷರಿಗೆ ಅಂಜೂರ

ಅದ್ಭುತ ! ಕಲ್ಲಂಗಡಿಗಳು

Read This Article in English 5 Super Fruits for Erectile Dysfunction

ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ  ಹಣ್ಣುಗಳ ಪ್ರಾಮುಖ್ಯತೆ

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ವಿವಿಧ ಕಾರಣಗಳಿಂದ ನಿಮಿರು ದೌರ್ಬಲ್ಯ  ಅಥವಾ ಲೈಂಗಿಕ ದುರ್ಬಲತೆ ಉಂಟಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಧಿಕ ರಕ್ತದೊತ್ತಡ, ಹೆಚ್ಚಿದ ರಕ್ತದ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು, ಮಲಬದ್ಧತೆ, ಖಿನ್ನತೆ ಇತ್ಯಾದಿಗಳು ಕಾರಣವಾಗಿರಬಹುದು . ಈ ಕಾರಣಗಳನ್ನು ಚೆನ್ನಾಗಿ ಅರಿತಾಗ ಪುರುಷರ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಲೈಂಗಿಕ ದುರ್ಬಲತೆಯನ್ನು ನಿವಾರಿಸಲು  ಅನಾರೋಗ್ಯಕರ ಆಹಾರ ಕ್ರಮದಿಂದ ಆರೋಗ್ಯಕರ ಆಹಾರಕ್ರಮಕ್ಕೆ ಬದಲಾಯಿಸುವುದು ಮುಖ್ಯ ಮಂತ್ರವಾಗಿದೆ. ಆರೋಗ್ಯಕರ ಆಹಾರ ಕ್ರಮವೆಂದರೆ  ಮುಖ್ಯವಾಗಿ ಸಾಕಷ್ಟು ತರಕಾರಿಗಳು, ಹಣ್ಣುಗಳು, ಆರೋಗ್ಯಕರ ಎಣ್ಣೆ, ಕಡಿಮೆ ಉಪ್ಪು, ಕಡಿಮೆ ಮಾಂಸ, ಕನಿಷ್ಠ ಡೈರಿ ಉತ್ಪನ್ನಗಳು ಮತ್ತು ಸಾಕಷ್ಟು ನೀರನ್ನು ಒಳಗೊಂಡಿರುತ್ತದೆ.

ಹಣ್ಣುಗಳು ನೈಸರ್ಗಿಕ ಔಷಧಿಗಳಾಗಿದ್ದು, ನಿಮಿರು ದೌರ್ಬಲ್ಯವನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತವೆ . ಅವುಗಳಲ್ಲಿ ವಿಟಮಿನ್ಗಳು , ಖನಿಜಗಳು, ಲವಣಗಳು ಮತ್ತು ನಾರುಗಳಂತಹ ಉತ್ತಮ ಪ್ರಮಾಣದ ಪೋಷಕಾಂಶಗಳಿವೆ.  ಇವು ರಕ್ತದೊತ್ತಡ, ರಕ್ತದ ಕೊಲೆಸ್ಟ್ರಾಲ್, ಮಲಬದ್ಧತೆ, ಬೊಜ್ಜು ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗು ಲೈಂಗಿಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ.


ಬಾಳೇಹಣ್ಣು  

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ಬಾಳೆಹಣ್ಣನ್ನು ಆಯುರ್ವೇದದಲ್ಲಿ “ಕದಳಿ ” ಎಂದು ಕರೆಯಲಾಗುತ್ತದೆ. ಆಯುರ್ವೇದ ಆಚಾರ್ಯರ ಪ್ರಕಾರ, ಚೆನ್ನಾಗಿ ಮಾಗಿದ ಬಾಳೆಹಣ್ಣು ರುಚಿಗೆ ಸಿಹಿಯಾಗಿರುತ್ತದೆ ಮತ್ತು ಶಕ್ತಿಯುತವಾಗಿರುತ್ತದೆ. ಇದನ್ನು “ವೃಶ್ಯ” ಅಥವಾ ಕಾಮೋತ್ತೇಜಕ ಎಂದು ಕರೆಯಲಾಗುತ್ತದೆ. ಇದು ದೇಹದ ತೂಕವನ್ನು  ಹೆಚ್ಚಿಸುತ್ತದೆ, ಹಸಿವನ್ನು ನೀಗಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಬಾಳೆಹಣ್ಣಿನ ಕುರಿತಾದ ಸಂಶೋಧನೆಗಳು ಹಲವಾರು ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸಿವೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ ಮತ್ತು ಆದ್ದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಅಗತ್ಯವಿರುವ ಸೋಡಿಯಂ ಪೊಟ್ಯಾಸಿಯಮ್ ಸಮತೋಲನವನ್ನು ಕಾಯುತ್ತದೆ . ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ಪುರುಷರ ಸಂತಾನೋತ್ಪತ್ತಿ ಅಂಗಗಳಿಗೆ  ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಬಾಳೇಹಣ್ಣು  ಆಹಾರದ ನಾರುಗಳಿಂದ ಸಮೃದ್ಧವಾಗಿದೆ, ಇದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಈ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಬಿ ಇದ್ದು  ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಟೆಸ್ಟೋಸ್ಟೆರಾನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಮಾವಿನ ಹಣ್ಣು 

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ಮಾವು ಹಣ್ಣುಗಳ ರಾಜ. ಮಾಗಿದ ಮಾವು ರುಚಿಗೆ ಸಿಹಿಯಾಗಿರುತ್ತದೆ, ಕಾಮೋತ್ತೇಜಕ ಮತ್ತು ಶುಕ್ರ ಧಾತು ಅಥವಾ ವೀರ್ಯವನ್ನು ಹೆಚ್ಚಿಸುತ್ತದೆ. ಇದು ಹೃದಯಕ್ಕೆ ಒಳ್ಳೆಯದು ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ವಿಜ್ಞಾನಿಗಳು ಈ ಹಣ್ಣಿನ ಅನೇಕ ಆರೋಗ್ಯ ಪ್ರಯೋಜನಗಳನ್ನು ಅನಾವರಣಗೊಳಿಸಿದ್ದಾರೆ. ಇದು ಸಾಕಷ್ಟು ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಇದು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಒಳಗೊಂಡಂತೆ ದೇಹದ ಅಂಗಾಂಶಗಳನ್ನು ಸರಿಪಡಿಸುತ್ತದೆ ಮತ್ತು ಪುನರುತ್ಪಾದಿಸುತ್ತದೆ. ವಿಟಮಿನ್ ಸಿ ಸಂಭೋಗದ ಆವರ್ತನವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಶಾಂತಗೊಳಿಸುತ್ತದೆ . ಇದು ಆರೋಗ್ಯಕರ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದ್ರಾಕ್ಷಿ ಹಣ್ಣು

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ದ್ರಾಕ್ಷಿಯನ್ನು ಆಯುರ್ವೇದದಲ್ಲಿ “ದ್ರಾಕ್ಷಾ ಅಥವಾ ಗೋಸ್ಥನಿ” ಎಂದು ಕರೆಯಲಾಗುತ್ತದೆ. ಅವು ರುಚಿಗೆ ಸಿಹಿಯಾಗಿರುತ್ತವೆ ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತವೆ . ಆಯುರ್ವೇದದ ಪ್ರಕಾರ ಈ ಹಣ್ಣುಗಳು ಮೃದುವಾಗಿರುತ್ತವೆ, ಜೀರ್ಣಿಸಿಕೊಳ್ಳಲು ಭಾರವಾಗಿರುತ್ತದೆ ಮತ್ತು ದೇಹದ ಅಂಗಾಂಶಗಳ ತೇವಾಂಶವನ್ನು ಹೆಚ್ಚಿಸುತ್ತವೆ. ದ್ರಾಕ್ಷಿಗಳು ಪುರುಷರು ಮತ್ತು ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವು ವೀರ್ಯ, ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣುಗಳ  ಚಲನಶೀಲತೆಯ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತವೆ. ಈ ಹಣ್ಣುಗಳು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಬಲಪಡಿಸುತ್ತವೆ. ದ್ರಾಕ್ಷಿಯನ್ನು “ವೃಶ್ಯ” ಎಂದು ಕರೆಯಲಾಗುತ್ತದೆ, ಅಂದರೆ ಅವು ನಿಮಿರು ದೌರ್ಬಲ್ಯ  ಮತ್ತು ಶೀಘ್ರ  ಸ್ಖಲನವನ್ನು ಸರಿಪಡಿಸಲು  ಸಹಾಯ ಮಾಡುತ್ತವೆ. ಒಣದ್ರಾಕ್ಷಿ ಪುರುಷರ ಲೈಂಗಿಕ ಆರೋಗ್ಯವನ್ನು ಹೆಚ್ಚಿಸುತ್ತದೆ . ಈ ಹಣ್ಣಿನ ಕುರಿತು ನಡೆಸಿದ ವಿವಿಧ ಸಂಶೋಧನೆಗಳ ಸಂದರ್ಭದಲ್ಲಿ ಹಲವಾರು ಸಂಗತಿಗಳು ಪತ್ತೆಯಾಗಿವೆ. ದ್ರಾಕ್ಷಿಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಾಕಷ್ಟು ಆಂಟಿ ಆಕ್ಸಿಡಂಟ್ಸ್ ಗಳನ್ನು ಒದಗಿಸುತ್ತವೆ . ದ್ರಾಕ್ಷಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತವೆ .

ಅಂಜೂರ

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ಆಯುರ್ವೇದದಲ್ಲಿ ಅಂಜೂರವನ್ನು “ಫಲ್ಗು ಅಥವಾ ರಾಜೌದುಂಬರ” ಎಂದೂ ಕರೆಯುತ್ತಾರೆ. ಅವು ಜೀರ್ಣಿಸಿಕೊಳ್ಳಲು ಭಾರವಾಗಿರುತ್ತದೆ ಮತ್ತು ದೇಹದ ಉಷ್ಣತೆ ಕಡಿಮೆ ಮಾಡುವ  ಸಾಮರ್ಥ್ಯವನ್ನು ಹೊಂದಿರುತ್ತವೆ. ವೀರ್ಯವನ್ನು ಹೆಚ್ಚಿಸಲು ಅಂಜೂರಗಳನ್ನು ವಾಜಿಕರಣ ಚಿಕಿತ್ಸೆಯಲ್ಲಿ ಘಟಕಾಂಶವಾಗಿ ಬಳಸಲಾಗುತ್ತದೆ. ಅವು ಫೈಬರ್, ವಿಟಮಿನ್ ಬಿ 6, ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಪ್ಯಾಂಟೊಥೆನಿಕ್ ಆಮ್ಲಗಳಿಂದ ಸಮೃದ್ಧವಾಗಿವೆ. ಪೌಷ್ಠಿಕಾಂಶ ತಜ್ಞರು ನಿಮಿರು ದೌರ್ಬಲ್ಯವನ್ನು ನಿವಾರಿಸಲು ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಅಂಜೂರದಲ್ಲಿದೆ ಎನ್ನುತ್ತಾರೆ . ಈ ಹಣ್ಣುಗಳು  ರಕ್ತದೊತ್ತಡ, ರಕ್ತದ ಕೊಲೆಸ್ಟ್ರಾಲ್, ಮಲಬದ್ಧತೆ ಕಡಿಮೆ ಮಾಡುವುದಲ್ಲದೆ, ಸಾಕಷ್ಟು ಆಂಟಿ ಆಕ್ಸಿಡಂಟ್ಸ್ ಗಳನ್ನೂ  ಪೂರೈಸಲು ಸಹಾಯ ಮಾಡುತ್ತವೆ.

ಕಲ್ಲಂಗಡಿ ಹಣ್ಣು

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ಕಲ್ಲಂಗಡಿಗಳು ಪಿತ್ತ ದೋಷವನ್ನು  ಸಮತೋಲನಗೊಳಿಸುತ್ತವೆ. ಅವು ದೇಹದ ಉಷ್ಣತೆ ಕಡಿಮೆ ಮಾಡುವ ಕಾರ್ಯನಿರ್ವಹಿಸುತ್ತವೆ ಮತ್ತು ದೇಹಕ್ಕೆ ಸಾಕಷ್ಟು ನೀರಿನ ಅಂಶವನ್ನು ಒದಗಿಸುತ್ತವೆ . ಕಲ್ಲಂಗಡಿಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ನಾರುಗಳು ಸಮೃದ್ಧವಾಗಿವೆ. ಈ ಹಣ್ಣು ಸಿಟ್ರುಲ್ಲೈನ್, ಎಂಬ ಅಮೈನೊ ಆಮ್ಲವನ್ನು ಒದಗಿಸುತ್ತದೆ. ಸಿಟ್ರುಲೈನ್ ಅರ್ಜಿನೈನ್ ಆಗಿ ಪರಿವರ್ತನೆಗೊಳ್ಳುತ್ತದೆ. ಅರ್ಜಿನೈನ್ ನೈಟ್ರಿಕ್ ಆಕ್ಸೈಡ್‌ನ ಪೂರ್ವಗಾಮಿ, ಇದು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಹೀಗೆ ಹಿಗ್ಗಿದ ರಕ್ತನಾಳಗಳು ಪುರುಷ ಜನನಾಂಗಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತವೆ. ಅಲ್ಲದೆ ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್ಸ್ ಗಳು ಸಹ ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುತ್ತವೆ .

ಆದ್ದರಿಂದ ಈ ಯಾವುದೇ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ ಮತ್ತು ಅಪಾರ ಲೈಂಗಿಕ ಆರೋಗ್ಯವನ್ನು ಆನಂದಿಸಿ. ಈ ಹಣ್ಣುಗಳು ನಿಮ್ಮ ಔಷಧಿಗಳಾಗಿರಲಿ.

Free Ayurvedic Consultation

Call us at  +91 9945995660 / +91 9448433911

Whats App + 91 6360108663/

Leave a Reply