ಸ್ನಾನದ ಚೂರ್ಣ ಅಥವಾ Ayurvedic herbal bath powder ಮನೆಯಲ್ಲೇ ಮಾಡುವ ಬಗೆ 

herbal bath powder in kannada, herbal bath powder for psoriasis,

ಆಯುರ್ವೇದೀಯ ಸ್ನಾನದ ಚೂರ್ಣ ಅಥವಾ Herbal bath powder

ಆಯುರ್ವೇದೀಯ ಸ್ನಾನದ ಚೂರ್ಣ ಅಥವಾ Herbal bath powder ಚರ್ಮಕ್ಕೆ ಬಲು ಹಿತಕಾರಿ . ಇದು ಸೋರಿಯಾಸಿಸ್ , ಎಗ್ಜಿಮಾ , ಒಣ ಚರ್ಮ , ಮೊಡವೆ , ಸೂಕ್ಷ್ಮ ಚರ್ಮ ಇತ್ಯಾದಿ ಚರ್ಮದ ತೊಂದರೆಗಳಿಂದ ಬಳಲುತ್ತಿರುವವರಿಗೆ ಬಹಳ ಉತ್ತಮವಾಗಿದೆ . ಈ ಚೂರ್ಣ ಚರ್ಮದ ನಿರ್ಜೀವವಾದ ಮೇಲ್ಪೊರೆಯನ್ನೂ (dead cells or dead skin ) ತೆಗೆದುಹಾಕುತ್ತದೆ . ಹೊಳಪು  ಹಾಗು ಕಾಂತಿಯನ್ನು  ಹೆಚ್ಚಿಸುವುದಲ್ಲದೆ ಚರ್ಮಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನೂ ಒದಗಿಸುತ್ತದೆ .

ಸಾಬೂನಿನಿಂದ ಆಗುವ ತೊಂದರೆಗಳು .

herbal bath powder in kannada, herbal bath powder for psoriasis, ಸಾಬೂನಿನಲ್ಲಿ ಕ್ಷಾರದ ಅಂಶವಿರುತ್ತದೆ . ಇದು ಚರ್ಮದ ನೈಸರ್ಗಿಕ ತೈಲವನ್ನು ತೆಗೆದುಹಾಕಿ ಚರ್ಮವನ್ನು ಒಣಗುವಂತೆ ಮಾಡುತ್ತದೆ . ಸೋರಿಯಾಸಿಸ್ , ಎಗ್ಝೀಮಾ , ಒಣ ಚರ್ಮ ಈ ತೊಂದರೆಗಳಿಂದ ಬಳಲುವವರಿಗೆ ಸಾಬೂನು ಮತ್ತಷ್ಟು ಹಾನಿಯನ್ನು ಉಂಟುಮಾಡುತ್ತದೆ . ಆದ್ದರಿಂದ ಆಯುರ್ವೇದೀಯ ಸ್ನಾನದ ಚೂರ್ಣವನ್ನು ಮನೆಯಲ್ಲಿಯೇ ತಯಾರಿಸುವುದು ಒಳ್ಳೆಯದು .

ಈ ಲೇಖನದಲ್ಲಿ ಈ ಚೂರ್ಣದ ತಯಾರಿಕೆಯ ವಿಧ ವಿವರಿಸಲಾಗಿದೆ

ಆಯುರ್ವೇದೀಯ ಸ್ನಾನದ ಚೂರ್ಣದ (herbal bath powder ) ತಯಾರಿಕೆಯ ವಿಧ


೧ ಕಪ್ ಕಡಲೆಬೇಳೆ

೧/೨ ಕಪ್ ಹೆಸರುಬೇಳೆ

೧/೪ ಕಪ್ ಮೆಂತ್ಯ

೧ ಬಟ್ಟಲು ಕಡಲೆಬೇಳೆ ತೆಗೆದುಕೊಳ್ಳಿ , ಇದರ ಜೊತೆ ೧/೨ ಬಟ್ಟಲು ಹೆಸರು ಬೇಳೆ ಸೇರಿಸಿಕೊಳ್ಳಿ . ಇವೆರಡರ ಜೊತೆ ೧/೪ ಬಟ್ಟಲಷ್ಟು ಮೆಂತ್ಯ ಬೆರೆಸಿಕೊಳ್ಳಿ . ಇವೆಲ್ಲವನ್ನೂ ಮಿಕ್ಸಿಯಲ್ಲಿ ಬೀಸಿಕೊಳ್ಳಿ . ಸಣ್ಣ ಕಣ್ಣಿನ ಜರಡಿಯಲ್ಲಿ ಈ ಹಿಟ್ಟನ್ನು ಬೇರ್ಪಡಿಸಿ . ನುಣ್ಣಗಿನ ಹಿಟ್ಟನ್ನು ಗಾಳಿಯಾಡದಂತೆ ಒಂದು ಗಾಜಿನ ಜಾಡಿಯಲ್ಲಿ ಸಂಗ್ರಹಿಸಿಡಿ . ಇದಕ್ಕೆ ಒಂದು ಗುರುತಿನ ಚೀಟಿಯನ್ನೂ ಸಹ ಅಂಟಿಸಿಡಬಹುದು ಇದನ್ನು ಫ್ರಿಡ್ಜ್ ನಲ್ಲಿ  ಸಹ ಇಡಬಹುದು . ಸ್ನಾನಕ್ಕೆ ಹತ್ತು ನಿಮಿಷ ಮುಂಚೆ ಒಂದು ಚಿಕ್ಕ ಬಟ್ಟಲಲ್ಲಿ ೧ ಚಮಚ ಈ ಹಿಟ್ಟಿನ ಮಿಶ್ರಣವನ್ನು ಹಾಕಿ ಸ್ವಲ್ಪ ನೀರು ಬೆರೆಸಿ ಕಲಸಿ ಇಡಿ . ೧೦ ನಿಮಿಷದ ನಂತರ ಈ ಮಿಶ್ರಣ ನುಣುಪಾಗಿ , ಸೋಪಿನಂತೆ ನಯವಾಗಿರುತ್ತದೆ. ಇದನ್ನು ಸೋಪಿನ ಬದಲು ಉಪಯೋಗಿಸಿ . ಇದೆ ಮಿಶ್ರಣವನ್ನು ಮುಖ ಲೇಪ ಅಥವಾ ಫೇಸ್ ಪ್ಯಾಕ್ ಆಗಿ ಸಹ ಉಪಯೋಗಿಸ ಬಹುದು . ಇದನ್ನು ಚಿಕ್ಕಮಕ್ಕಳು, ಬಾಣಂತಿಯರು , ವಯಸ್ಸಾದವರೂ ಸಹ ಬಳಸಬಹುದು .

ಈ ಸ್ನಾನ ಚೂರ್ಣದ  ಔಷಧೀಯ ಗುಣಗಳು ಹಾಗು ಲಾಭಗಳು

herbal bath powder in kannada, herbal bath powder for psoriasis,

  1. ಈ ಚೂರ್ಣಪೌಷ್ಟಿಕಾಂಶಗಳ ಆಗರವಾಗಿದೆ. ಸೋರಿಯಾಸಿಸ್ , ಎಗ್ಜ್ಹಿಮ , ಮೊಡವೆ ಮುಂತಾದ ಚರ್ಮದ ತೊಂದರೆ ಇರುವವರು ಇದನ್ನು ಬಳಸಬಹುದು .
  2. ಇದು ಅಡುಗೆಮನೆಯಲ್ಲಿ ಸುಲಭವಾಗಿದೊರಕುವ ಪದಾರ್ಥಗಳಿಂದ ಮಾಡಲ್ಪಟ್ಟಿದೆ . ಆದ್ದರಿಂದ ತಯಾರಿಸುವುದು ಬಲು ಸುಲಭ.
  3. ಇದರಲ್ಲಿನ ಪೌಷ್ಟಿಕಾಂಶಗಳು ತ್ವಚೆಯನ್ನು ಪೋಷಿಸುವುದಲ್ಲದೆ ಅದನ್ನು ಆರೋಗ್ಯವಾಗಿ ಇಡುತ್ತದೆ.
  4. ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳಿಲ್ಲ .
  5. ಈ ಚೂರ್ಣ ತ್ವಚೆಯ ನೈಸರ್ಗಿಕ ತೈಲವನ್ನು ಕಾಪಾಡುತ್ತದೆ .
  6. ಸತ್ತ ಚರ್ಮದ ಜೀವಕೋಶಗಳ್ಳನು ತೆಗೆದು ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ .
  7. ಈ ಹುಡಿಯುಆಮ್ಲ ಮತ್ತು ಕ್ಷಾರ ರಹಿತವಾಗಿದೆ

ಇಮೇಲ್ – drsavithasuri@gmail.com    ವಾಟ್ಸ್ ಅಪ್ – +91 6360108663

Leave a Reply

Close Menu